
ಸುಖದ ಸುಪ್ಪತ್ತಿನೋಳ್ ಅರೆದವರ‍್ಯಾರು??
ಹೆತ್ತ ಕರುಳೋಳ್ ಬೆಚ್ಚಗೆ ಮಲಗಿಸಿದವರ‍್ಯಾರು??
ಬೆಚ್ಚನೆಯ ಮಂಚದಲಿ ಹಾಸಿಗೆ ಹಾಕಿಟ್ಟವರ‍್ಯಾರು??
ಹಿಡಿ ಅಕ್ಕಿ ಜೊಗುಳದೊಳಗಿಹಲು ಭಿಕ್ಷೇ ಬೇಡಿದವರ‍್ಯಾರು??
ಹರಿದ ಹಾಸಿಗೆಯನು ಹಸಿ ಮಾಡಿದವರ‍್ಯಾರು??
ಹಸಿವೆಂದಾಗ ಹಸುವಂತೆ ಹಸಿ ಹಾಲಿಕ್ಕುವವರ‍್ಯಾರು??
ಹಗಲೆನ್ನದೆ ಇರುಳೆನ್ನದೆ ಹಣೆಯನು ಚಪ್ಪಡಿಸುವವರ‍್ಯಾರು??
ಹಂಗಿನ ಲೋಕದಲ್ಲಿ ಕರುಳಿಗೆ ಬಿಂಬ ಕೊಟ್ಟವರ‍್ಯಾರು??
ಮೆತ್ತನೆಯ ಕೈಗಳಿಗೆ ಮಧುವಂತೆ ಚುಂಬಿಸಿದವರ‍್ಯಾರು??
ಮೂಕವಾಗಿರುವ ಯಮಗೆ ಮಾತನ್ನಿಕ್ಕಿದವರ‍್ಯಾರು??
ಮಣ್ಣನೊಕ್ಕಿರುವಾಗ ಬಾಯನ್ನು ಒರೆಸಿದವರ‍್ಯಾರು??
ಮಡಿದು ಹೋಗುತಿರುವ ಎನಗಿನ್ನು ಗತಿ ಯಾರು??????!!!!





