
ಈ ಪುಟ್ಟ ಜೀವಕೇ ಆಸರೆ ನೀನಾದೇ
ನನ್ನ ಈ ಭಾವಕೇ ಹೆಸರು ನೀನಾದೇ
ಬರಿದಾದ ಈ ಜೀವಕೇ ಉಸಿರನು ನೀ ತಂದೆ
ನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೊಗೆಂದೇ!!!
ಕಾಣದ ಜೀವಕೇ ಕಣ್ಣುಗಳನು ಕೊಟ್ಟೆ
ಕನಸಿನ ಲೋಕದಲಿ ಮೈಮರೆಸಿ ಬಿಟ್ಟೆ
ಅಂಗಳದ ಮನಸ್ಸಿಗೆ ಬೆಳದಿಂಗಳವ ಕೊಟ್ಟೆ
ಇನ್ಯಾಕೇ ನನ್ನನು ಒಬ್ಬನೇ ಮಾಡಿಬಿಟ್ಟೇ????
ಹಸಿಯಾದ ಹಣ್ಣಿಗೆ ರಸವನು ನೀ ತಂದೆ
ಹಸಿವನು ಮರೆಸಿ ನೀನೇ ಎನಗೆ ಉಸಿರೆಂದೆ
ಹತ್ತು ಜನರೆದುರಲ್ಲಿ ಏನ್ನನು ತಭ್ಭಿಕೊಂಡೆ
ಇನ್ಯಾಕೇ ನನ್ನನು ದೂರ ಮಾಡಿಕೊಂಡೆ???

No comments:
Post a Comment