Friday, June 25, 2010


ಸುಖದ ಸುಪ್ಪತ್ತಿನೋಳ್ ಅರೆದವರ‍್ಯಾರು??
ಹೆತ್ತ ಕರುಳೋಳ್ ಬೆಚ್ಚಗೆ ಮಲಗಿಸಿದವರ‍್ಯಾರು??
ಬೆಚ್ಚನೆಯ ಮಂಚದಲಿ ಹಾಸಿಗೆ ಹಾಕಿಟ್ಟವರ‍್ಯಾರು??
ಹಿಡಿ ಅಕ್ಕಿ ಜೊಗುಳದೊಳಗಿಹಲು ಭಿಕ್ಷೇ ಬೇಡಿದವರ‍್ಯಾರು??

ಹರಿದ ಹಾಸಿಗೆಯನು ಹಸಿ ಮಾಡಿದವರ‍್ಯಾರು??
ಹಸಿವೆಂದಾಗ ಹಸುವಂತೆ ಹಸಿ ಹಾಲಿಕ್ಕುವವರ‍್ಯಾರು??
ಹಗಲೆನ್ನದೆ ಇರುಳೆನ್ನದೆ ಹಣೆಯನು ಚಪ್ಪಡಿಸುವವರ‍್ಯಾರು??
ಹಂಗಿನ ಲೋಕದಲ್ಲಿ ಕರುಳಿಗೆ ಬಿಂಬ ಕೊಟ್ಟವರ‍್ಯಾರು??

ಮೆತ್ತನೆಯ ಕೈಗಳಿಗೆ ಮಧುವಂತೆ ಚುಂಬಿಸಿದವರ‍್ಯಾರು??
ಮೂಕವಾಗಿರುವ ಯಮಗೆ ಮಾತನ್ನಿಕ್ಕಿದವರ‍್ಯಾರು??
ಮಣ್ಣನೊಕ್ಕಿರುವಾಗ ಬಾಯನ್ನು ಒರೆಸಿದವರ‍್ಯಾರು??
ಮಡಿದು ಹೋಗುತಿರುವ ಎನಗಿನ್ನು ಗತಿ ಯಾರು??????!!!!

Monday, June 14, 2010

ಮನದೋಳ ಮಾತು


ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ
ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ
ಸೋರಿ ಹೊಗುತಲಿದೆ ಮನಸಿನ ತಾಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಣ್ಣಿದ್ದು ಕುರುಡುತನ ಹಾಡಬೇಕೆ ಗುಣಗಾನ
ಮನಸಿನಲಿ ಸ್ತಿರತನ ಕಾಡುತಲಿದೆ ಮೌನತನ
ಅರ್ಥವಿಲ್ಲದ ಬದುಕಿನಲ್ಲಿ ನಡೆದಿದೆ ನನ್ನ ಪಯಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ??
ಕವಿತೆಗಳನು ಬಲ್ಲೇನಾ, ಕನಸುಗಳನು ಕಾಣೇನಾ??
ಗಡಿಯಾರದ ಜೀವನಾ ಮುಳ್ಳೇ ಮುಳ್ಳು ಈ ದಿನ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ,
ಕಡೆ ಹಾಕಲಾಗದಿರುವ ಮನದೋಳದ ಬಡತನ
ಕೊನೆ ಆಗಲಿ ಈ ದಿನ, ಮಿತಿಯಿಲ್ಲದೆ ಬದುಕೆನಾ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ.....

ಈ ಪುಟ್ಟ ಜೀವಕೇ ಆಸರೆ ನೀನಾದೇ


ಈ ಪುಟ್ಟ ಜೀವಕೇ ಆಸರೆ ನೀನಾದೇ
ನನ್ನ ಈ ಭಾವಕೇ ಹೆಸರು ನೀನಾದೇ
ಬರಿದಾದ ಈ ಜೀವಕೇ ಉಸಿರನು ನೀ ತಂದೆ
ನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೊಗೆಂದೇ!!!

ಕಾಣದ ಜೀವಕೇ ಕಣ್ಣುಗಳನು ಕೊಟ್ಟೆ
ಕನಸಿನ ಲೋಕದಲಿ ಮೈಮರೆಸಿ ಬಿಟ್ಟೆ
ಅಂಗಳದ ಮನಸ್ಸಿಗೆ ಬೆಳದಿಂಗಳವ ಕೊಟ್ಟೆ
ಇನ್ಯಾಕೇ ನನ್ನನು ಒಬ್ಬನೇ ಮಾಡಿಬಿಟ್ಟೇ????

ಹಸಿಯಾದ ಹಣ್ಣಿಗೆ ರಸವನು ನೀ ತಂದೆ
ಹಸಿವನು ಮರೆಸಿ ನೀನೇ ಎನಗೆ ಉಸಿರೆಂದೆ
ಹತ್ತು ಜನರೆದುರಲ್ಲಿ ಏನ್ನನು ತಭ್ಭಿಕೊಂಡೆ
ಇನ್ಯಾಕೇ ನನ್ನನು ದೂರ ಮಾಡಿಕೊಂಡೆ???